ಭಜನಾವಳಿ

ರಾಗ: ನಾಸಿಕಾಭೂಷಣಿ

ತಾಳ: ಆದಿತಾಳ

॥ಪಲ್ಲವಿ॥

॥ ಅಡಿಗಳಿಗೆ ವಂದಿಪೆ। ಅನಂತಾರ್ಯ । ಗುರುವೇ ನಿಮ್ ॥
॥ ಅಡಿಗಳಿಗೆ ವಂದಿಪೆ । ಜ್ಞಾನವೈರಾಗ್ಯನಿಧಯೇ ॥ ಅಡಿ ॥
॥ ಅಡಿ ॥ ಪ ॥

॥ ವಿಶಿಷ್ಟಾದ್ವೈತ ಮತ । ಕುಲಾಂಬುಧಿಗೆ । ಚಂದ್ರನಾದೆ ॥
॥ ಗುರು ಆಳ್ವಾರ್ ಸ್ವಾಮಿಯಿಂದ । ಉಪದೇಶಿಕನಾದೆ ॥ ಅಡಿ ॥

॥ಚರಣ॥

॥ ನಿನ್ನ ಅತಿಶಯ ಗುಣ । ನಿನ್ನ ಅತಿಶಯ ಗುಣ...॥
॥ ನಿನ್ನ ಅತಿಶಯ ಗುಣ । ವರ್ಣಿಸ । ಲಳವಲ್ಲ ॥
॥ ನಿನ್ನ ಔದಾರ್ಯಮನ ಪ್ರಶ್ನಿಸ । ಳವಲ್ಲ ॥
॥ ನಿನ್ನ ಆದರಾತಿಥ್ಯ । ಜಗದ್ವಿಖ್ಯಾತ.. ॥
॥ ನಿನ್ನ ಮಾರ್ಗದರ್ಶನದಿಂದ । ಆನಂದವ । ನುಣಿಸಿದೆ ॥ ಅಡಿ ॥

ಭಜನಾವಳಿ

॥ ಗುರುವೇ ಸದ್ಗುರುವೇ - ತಾತಾರ್ಯ ಗುರುವೇ ॥
॥ ಗುರುವೇ - ಸದ್ಗುರುವೇ - ಶೇಷಾರ್ಯ ಗುರುವೇ ॥
।। ಪರಿಪರಿ ಸಂಸ್ಕೃತ ಸಂಶೋಧನೆಗೆಂದು ॥
॥ ಕಲೆಕಲೆ ಹಾಕುತ । ತಾಳೆಗರಿಗಳ ॥
। ಭರಭರದಿ ದುಡಿದು ಹಗಲಿರುಳೆನ್ನದೆ ॥
॥ ಕ್ಷೇತ್ರವನ್ನುದ್ಧರಿಸಿದ । ತಾತಾರ್ಯನೇ ॥ ಗುರುವೇ ॥
॥ ಆನಂದಾಳ್ವಾ‌ರ್ ವಂಶದ । ಕುಲತಿಲಕನೇ (ಮಕುಟ ಪ್ರಾಯನೇ)
॥ ಕಾನನವ ಮಾಡಿದೆ । ಉದ್ಯಾನವಾ..॥
॥ ಹರಿಗರ್ಪಿಸಿದೆ । ಪುಷ್ಪದೇಗುಲವಾ ॥ ಗುರುವೇ ॥
॥ ಕಾಣೆ ಕಾಣೆನಾ ಜ್ಞಾನಪ್ರೇರಕರ ॥
॥ ಕಾಣೆ ಕಾಣೆನಾ ಜ್ಞಾನಪಂಡಿತರ ॥
॥ ನಿನ್ನನುಸರಿಸುವ ಯುಕ್ತಿ ಕೊಡುವೆಯಾ ॥
॥ ನಿನ್ನಂತಾಗುವ ಶಕ್ತಿ ಕೊಡುವೆಯಾ ॥
॥ ನಿನ್ನ ಮಾರ್ಗವಾಯಿತು ಮೋಕ್ಷದೀಕ್ಷೆ ॥
॥ ನಿನ್ನಾಶೀರ್ವಾದವೇ ಶ್ರೀರಕ್ಷೆ । ಗುರುವೇ ॥

ಶ್ರೀದಾಸರುಗಳ ಕೀರ್ತನೆಗಳ ಅನುಕರಣೆ