ಜ್ಞಾನಿ-ವಿಜ್ಞಾನಿ-ಮಹಾಜ್ಞಾನಿ
ನಮೋ ನಮೋ ಅನಂದಾಣ್ ಪಿಳ್ಳೈ ಕುಲತಿಲಕ
ನಮೋ ನಮೋ ಅನಂದಾಣ್ ಪಿಳ್ಳೈ ಕುಲನಾಯಕ
ಅಡಿಗಡಿಗೆ ವಂದಿಪೆವು ಪರಮಗುರುವೆ-ನಿ
ಮ್ಮಡಿಗಳಿಗೆ ವಂದಿಪೆವು ಜ್ಞಾನವೈರಾಗ್ಯನಿಧಿಯೆ
ನಿಮ್ಮತಿಶಯಗುಣ – ನಿಮ್ಮತಿಶಯಮನ
ನಿಮ್ಮತಿಶಯಶ್ರಮ –ನಿಮ್ಮತಿಶಯಕ್ರಮ
ನಿಮ್ಮತಿಶಯ ಬೃಹತ್ ಸಂಶೋಧನೆಗಳ ಛಲ
ಜನ್ಮಭೂಮಿಗೆ ಸಿಕ್ಕ ಮಹತ್ಸಾಧನೆಗಳ ಫಲ
ಕಾಣೆಕಾಣೆವು ನಿಮ್ಮಂಥ ಜ್ಞಾನಪ್ರೇರಕರ
ಕಾಣೆಕಾಣೆವು ನಿಮ್ಮಂಥ ಜ್ಞಾನಪಂಡಿತರ
ಕಾಣೆಕಾಣೆವು ನಿಮ್ಮಂಥ ವಿಶ್ವವಿಖ್ಯಾತರ
ಕಾಣೆಕಾಣೆವು ನಿಮ್ಮಷ್ಟು ಪಟ್ಟಪದವೀ ಪಡೆದವರ
ಕಂಡೆಕಂಡೆವು ನಿಮ್ಮ ಘನಗಂಭೀರ ಸುಂದರಾಕಾರವ
ಕಂಡೆಕಂಡೆವು ನಿಮ್ಮಲ್ಲಿ ತಂದೆತಾಯಿಯರ ಪ್ರೀತಿವಾತ್ಸಲ್ಯವ
ಕಂಡೆಕಂಡೆವು ನಿಮ್ಮಲ್ಲಿ ಶ್ರುತಿ, ಪುರಾಣ, ಸಂಗೀತ ಜ್ಞಾನಸಾಗರವ
ಕಂಡೆಕಂಡೆವು ನಿಮ್ಮ ಸಮಾಜಸೇವೆಯ ಜ್ಞಾನಸೇತುವೆಯ
ಪಡೆದೆವು ನಾವಿಂದು ನಿಮ್ಮ ಸಹೋದರತ್ವದ ಭಾಗ್ಯವ
ಒಡೆಯ ನೀವು ಗೋದಾದೇವಿಗೆ ಪರಮಪ್ರಿಯ
ಕಡೆಹಾಯಿಸುವ ಪರಮಪುರುಷ ಶ್ರೀಮನ್ನಾರಾಯಣ
ನೀಡಲಿ ನಿಮಗೆ ಚಿರವಾದ ಪರಮಪದ ಸಾಯುಜ್ಯವ
ನಮೋ ನಮೋ ಅನಂದಾಣ್ ಪಿಳ್ಳೈ ಕುಲನಾಯಕ
ಅಡಿಗಡಿಗೆ ವಂದಿಪೆವು ಪರಮಗುರುವೆ-ನಿ
ಮ್ಮಡಿಗಳಿಗೆ ವಂದಿಪೆವು ಜ್ಞಾನವೈರಾಗ್ಯನಿಧಿಯೆ
ನಿಮ್ಮತಿಶಯಗುಣ – ನಿಮ್ಮತಿಶಯಮನ
ನಿಮ್ಮತಿಶಯಶ್ರಮ –ನಿಮ್ಮತಿಶಯಕ್ರಮ
ನಿಮ್ಮತಿಶಯ ಬೃಹತ್ ಸಂಶೋಧನೆಗಳ ಛಲ
ಜನ್ಮಭೂಮಿಗೆ ಸಿಕ್ಕ ಮಹತ್ಸಾಧನೆಗಳ ಫಲ
ಕಾಣೆಕಾಣೆವು ನಿಮ್ಮಂಥ ಜ್ಞಾನಪ್ರೇರಕರ
ಕಾಣೆಕಾಣೆವು ನಿಮ್ಮಂಥ ಜ್ಞಾನಪಂಡಿತರ
ಕಾಣೆಕಾಣೆವು ನಿಮ್ಮಂಥ ವಿಶ್ವವಿಖ್ಯಾತರ
ಕಾಣೆಕಾಣೆವು ನಿಮ್ಮಷ್ಟು ಪಟ್ಟಪದವೀ ಪಡೆದವರ
ಕಂಡೆಕಂಡೆವು ನಿಮ್ಮ ಘನಗಂಭೀರ ಸುಂದರಾಕಾರವ
ಕಂಡೆಕಂಡೆವು ನಿಮ್ಮಲ್ಲಿ ತಂದೆತಾಯಿಯರ ಪ್ರೀತಿವಾತ್ಸಲ್ಯವ
ಕಂಡೆಕಂಡೆವು ನಿಮ್ಮಲ್ಲಿ ಶ್ರುತಿ, ಪುರಾಣ, ಸಂಗೀತ ಜ್ಞಾನಸಾಗರವ
ಕಂಡೆಕಂಡೆವು ನಿಮ್ಮ ಸಮಾಜಸೇವೆಯ ಜ್ಞಾನಸೇತುವೆಯ
ಪಡೆದೆವು ನಾವಿಂದು ನಿಮ್ಮ ಸಹೋದರತ್ವದ ಭಾಗ್ಯವ
ಒಡೆಯ ನೀವು ಗೋದಾದೇವಿಗೆ ಪರಮಪ್ರಿಯ
ಕಡೆಹಾಯಿಸುವ ಪರಮಪುರುಷ ಶ್ರೀಮನ್ನಾರಾಯಣ
ನೀಡಲಿ ನಿಮಗೆ ಚಿರವಾದ ಪರಮಪದ ಸಾಯುಜ್ಯವ